ಹೈಯರ್ ಎಜ್ಯುಕೇಶನ್ ಎಂದು ವಿಷಯ ಬಂದ್ರೆ ಇಂಜಿನೀಯರ್ ಮೊದಲ ಸ್ಥಾನದಲ್ಲಿ ಇರುತ್ತದೆ. ಇನ್ನು ಈ ಕೋರ್ಸ್ ಗೆ ಹೆಚ್ಚಿನ ಬೇಡಿಕೆ ಕೂಡಾ ಇದೆ. ಭಾರತದಲ್ಲಿ ಹಲವಾರು ಇಂಜಿನೀಯರಿಂಗ್ ಶಿಕ್ಷಣ ಸಂಸ್ಥೆಗಳು ಕೂಡಾ ಇವೆ ಅಷ್ಟೇ ಅಲ್ಲ ಇಲ್ಲಿ ನೀವು ಸೀಟು ಪಡೆಯಬೇಕಾದ್ರೆ ಮುಖ್ಯವಾಗಿ ಅತೀ ಹೆಚ್ಚು ಅಂಕಗಳಿಸಬೇಕು ಹಾಗೆಯೇ ಜತೆಗೆ ಪ್ರತಿಷ್ಟಿತ ಇಂಜಿನೀಯರಿಂಗ್ ಶಿಕ್ಷಣ ಸಂಸ್ಥೆಗಳು ಎಂಟ್ರೇಸ್ ಪರೀಕ್ಷೆ ಮಾಡುತ್ತವೆ. ಅದರಲ್ಲಿ ನೀವು ಅತೀ ಹೆಚ್ಚು ಅಂಕ ಸ್ಕೋರ್ ಮಾಡಿದ್ರೆ ಸೀಟು ನಿಮ್ಮದಾಗಿಸಿಕೊಳ್ಳಬಹುದು.
ಹಾಗಾಗಿ ಪಿಯುಸಿ ನಂತರ ಯಾರೆಗೆಲ್ಲಾ ಇಂಜಿನೀಯರಿಂಗ್ ಲೈನ್‌ಗೆ ಹೋಗಬೇಕು ಎಂದು ಅಂದುಕೊಂಡಿದ್ದೀರೋ ನೀವೆಲ್ಲಾ ಮೊದಲಿಗೆ ಎಂಟ್ರೇಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಇನ್ನು ಎಂಟ್ರೇಸ್ ಪರೀಕ್ಷೆ ಬಗ್ಗೆ ಹೇಳುವಾದ್ರೆ ಈಗಾಗಲೇ ಸ್ಟೇಟ್ ಹಾಗೂ ಸೆಂಟ್ರಲ್ ಲೆವೆಲ್‌ನಲ್ಲಿ ನಡೆಸುವ ಕೆಲವೊಂದು ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡಿದ್ದೀರಾ. ಇಂಜಿನೀಯರಿಂಗ್ ಕ್ಷೇತ್ರದಲ್ಲಿ ಕೆರಿಯರ್ ಮೂಡಿಸಬೇಕೆಂದು ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಹಾಜರಾಗುತ್ತಾರೆ.
2019ರಲ್ಲಿ ಯಾವೆಲ್ಲಾ ಇಂಜಿನೀಯರಿಂಗ್ ಕೋರ್ಸ್ ಗಳ ಪ್ರವೇಶ ಪರೀಕ್ಷೆ ಇದೆ ಎಂಬ ಮಾಹಿತಿ ಇದೀಗ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತದೆ. ಸ್ಟಡಿ ಮಾಡುವ ಮುನ್ನ ಯಾವೆಲ್ಲಾ ಪರೀಕ್ಷೆ ಯಾವ ದಿನಾಂಕದಂದು ಎಂದು ನೋಟ್ ಮಾಡಿಕೊಳ್ಳಿ.
ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ (ಜೆಇಇ):
ಇಂಜಿನೀಯರಿಂಗ್ ಎಂಟ್ರೇಂಸ್ ಪರೀಕ್ಷೆ ಎಂದಾಗ ಜೆಇಇ ಮೊದಲ ಸ್ಥಾನದಲ್ಲಿ ಇರುತ್ತದೆ. ದೇಶದ ಪ್ರತಿಷ್ಟಿತ ಐಐಟಿ ಮತ್ತು ಎನ್‌ಐಟಿ ಶಿಕ್ಷಣ ಸಂಸ್ಥೆಯಲ್ಲಿ ಸೀಟು ಪಡೆಯಬೇಕಾದ್ರೆ ನೀವು ಜೆಇಇ ನಡೆಸುವ ಎಂಟ್ರೇಂಸ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಸ್ಕೋರ್ ಮಾಡಿ ಪಾಸಾಗಲೇ ಬೇಕು. ಅಷ್ಟೇ ಅಲ್ಲ ಇನ್ನುಮುಂದೆ ಜೆಇಇ ಪ್ರಮುಕ ಪರೀಕ್ಷೆಯು ವರ್ಷಕ್ಕೆ ಎರಡು ಬಾರಿ ನಡೆಯಲಿದೆ ಎಂದ ಆದೇಶ ಕೂಡಾ ಹೊರಬಿದ್ದಿದ್ದು, ವಿದ್ಯಾರ್ಥಿಗಳು ಈ ಆದೇಶವನ್ನ ಒಪ್ಪಿಕೊಂಡಿದ್ದಾರೆ ಕೂಡಾ.
ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ, ಈಗಾಗಲೇ ಜೆಇಇ ಪ್ರಮುಖ ಪರೀಕ್ಷೆಯ ದಿನಾಂಕ ಪ್ರಕಟಿಸಿದ್ದು, ಜೆಇಇ ಪ್ರಮುಖ 1 ಮತ್ತು 2 ಪರೀಕ್ಷೆಯ ದಿನಾಂಕ ಈ ಕೆಳಗೆ ನೀಡಲಾಗಿದೆ.
ಜೆಇಇ ಪ್ರಮುಖ ಪರೀಕ್ಷೆಯ ದಿನಾಂಕ 2019
ಜೆಇಇ ಪ್ರಮುಖ 1:
ಪರೀಕ್ಷೆ ಮಾದರಿ: ಕಂಪ್ಯೂಟರ್ ಮಾದರಿ
ರಿಜಿಸ್ಟ್ರೇಶನ್ ದಿನಾಂಕ: ಸೆಪ್ಟಂಬರ್ 1 ಮತ್ತು 30, 2018
ಪ್ರವೇಶ ಪತ್ರ ಡೌನ್‌ಲೋಡ್: ಡಿಸಂಬರ್ 17, 2018
ಪರೀಕ್ಷೆ ದಿನಾಂಕ: ಜನವರಿ 6 ರಿಂದ 20, 2019
ಫಲಿತಾಂಶ ದಿನಾಂಕ: ಜನವರಿ 31, 2018
ಜೆಇಇ ಪ್ರಮುಖ 2:
ಜೆಇಇ ಪ್ರಮುಖ 2:
ಪರೀಕ್ಷೆ ಮಾದರಿ: ಕಂಪ್ಯೂಟರ್ ಮಾದರಿ
ರಿಜಿಸ್ಟ್ರೇಶನ್ ದಿನಾಂಕ: ಫೆಬ್ರವರಿ 8 ರಿಂದ ಮಾರ್ಚ್ 7, 2019
ಪ್ರವೇಶ ಪತ್ರ ಡೌನ್‌ಲೋಡ್: ಮಾರ್ಚ್ 18, 2019
ಪರೀಕ್ಷೆ ದಿನಾಂಕ: ಎಪ್ರಿಲ್ 6 ರಿಂದ 20, 2019
ಫಲಿತಾಂಶ ದಿನಾಂಕ: ಎಪ್ರಿಲ್ 30, 2019
ಬಿಐಟಿಎಸ್ ಎಟಿ 2019
ಐಐಟಿ ಹಾಗೂ ಎನ್‌ಐಟಿ ಥರಹ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಮತ್ತು ಸೈನ್ಸ್ ಪಿಲನಿ ಯಲ್ಲಿ ಕೂಡಾ ಸೀಟು ಸಿಗುವುದು ತುಂಬಾ ಕಷ್ಟ. ಹಲವಾರು ಇಂಜಿನೀಯರಿಂಗ್ ಕೋರ್ಸ್ ಗಳಿಗೆ ಸೀಟು ಸಿಗಬೇಕಾದ್ರೆ ಇವರು ನಡೆಸುವ ಎಂಟ್ರೇಂಸ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಸ್ಕೋರ್ ಮಾಡಬೇಕು.
ಐಐಟಿ ಹಾಗೂ ಎನ್‌ಐಟಿ ಥರಹ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಮತ್ತು ಸೈನ್ಸ್ ಪಿಲನಿ ಯಲ್ಲಿ ಕೂಡಾ ಸೀಟು ಸಿಗುವುದು ತುಂಬಾ ಕಷ್ಟ. ಹಲವಾರು ಇಂಜಿನೀಯರಿಂಗ್ ಕೋರ್ಸ್ ಗಳಿಗೆ ಸೀಟು ಸಿಗಬೇಕಾದ್ರೆ ಇವರು ನಡೆಸುವ ಎಂಟ್ರೇಂಸ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಸ್ಕೋರ್ ಮಾಡಬೇಕು.
ಪ್ರತೀ ವರ್ಷ ಈ ಪರೀಕ್ಷೆಗೆ ಸುಮಾರು 2ಲಕ್ಷ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ಪಿಲನಿ, ಗೋವಾ ಹಾಗೂ ಹೈದ್ರಾಬಾದ್ ನಲ್ಲಿ ಶಿಕ್ಷಣ ಸಂಸ್ಥೆ ಹೊಂದಿರುವ ಈ ಸಂಸ್ಥೆಯಲ್ಲಿ ಸೀಟು ಪಡೆಯಬೇಕಾದ್ರೆ ಕಂಪ್ಯೂಟರ್ ಮಾದರಿಯಲ್ಲಿ ಯಾವುದೇ ಬ್ರೇಕ್ ಇಲ್ಲದೇ ಸತತ ಮೂರು ಗಂಟೆ ನಡೆಯುವ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕಾಗಿದೆ.
ಬಿಐಟಿಎಸ್ ಎಟಿ ಪರೀಕ್ಷೆ ದಿನಾಂಕ 2019:
ಆನ್‌ಲೈನ್ ಅಪ್ಲಿಕೇಶನ್: ಡಿಸಂಬರ್ 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 2019
ಪರೀಕ್ಷೆ ದಿನಾಂಕ: ಮೇ 2019
No comments:
Post a Comment