ಎನ್ಟಿಪಿಸಿ 164 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ಮೇ 16ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್
ನಿಗಮ (ಎನ್ ಟಿಪಿಸಿ) 47 ಎಕ್ಸಿಕ್ಯೂಟೀವ್ ಟ್ರೈನಿ, 47 ಅಸೋಸಿಯೇಟ್ (ಅಕೌಂಟ್ಸ್) ಸೇರಿದಂತೆ ವಿವಿಧ
ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ದರಿರಬೇಕು. ಎಕ್ಸಿಕ್ಯುಟೀವ್
ಟ್ರೈನಿ ಹುದ್ದೆಗೆ 24-900 ರಿಂದ 50500, ಅಸೋಸಿಯೇಟ್ (ಅಕೌಂಟ್ಸ್) ಹುದ್ದೆಗೆ 44000 ರೂ. ವೇತನವನ್ನು
ನಿಗದಿ ಮಾಡಲಾಗಿದೆ.
ಎಕ್ಸಿಕ್ಯೂಟೀವ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿಎ ಅಥವ
ICWA/CMA ಕೋರ್ಸ್ ಪೂರ್ಣಗೊಳಿಸಿರಬೇಕು. ಅಸೋಸಿಯೇಟ್ (ಅಕೌಂಟ್ಸ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
ಸಿಎ ಅಥವ ICWA/CMA ಕೋರ್ಸ್ ಪೂರ್ಣಗೊಳಿಸಿರಬೇಕು.
ಎಕ್ಸಿಕ್ಯೂಟೀವ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸುವ
ಅಭ್ಯರ್ಥಿಗಳಿಗೆ 29 ವರ್ಷ. ಅಸೋಸಿಯೇಟ್ (ಅಕೌಂಟ್ಸ್) ಹುದ್ದೆಗೆ 27 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕಗಳ ವಿವರ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಚಲನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿ
ಮಾಡಬೇಕಾಗಿದೆ. ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ 300 ರೂ. ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
ಬೇರೆ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕಗಳು ಇರುವುದಿಲ್ಲ.
Notification : http://open.ntpccareers.net/201804finchmed/index_files/adeng.pdf
Apply Link : http://open.ntpccareers.net/201804finchmed/index.php
Apply Link : http://open.ntpccareers.net/201804finchmed/index.php
No comments:
Post a Comment